Sunday, July 5, 2009

ಮಡಿಲು


ಪ್ರೀತಿಯರಸಿ ಹೊರಟ ಜೀವ,
ಬಳಲಿ ಸೊರಗಿದೆ ಉಂಡು ನೋವ,
ಯಾರೋ ಕೊಟ್ಟ ಕೈತುತ್ತು ತಿಂದು,
ಹೊಂಗೆ ಮರದ ನೆರಳಲ್ಲಿ ನಿದಿರಿಸಿದಂತೆ ಕಂಡೆ ಕನಸೊಂದು.
ಗೆಳತಿ, ತುತ್ತು ಕೊಟ್ಟ ಆ ಕೈ ನಿನದಾಗಬಾರದೆ!!
ಆ ಹೊಂಗೆ ಮರದ ನೆರಳು ನಿನ್ನ ಮಡಿಲಾಗಬಾರದೆ!!